ಟ್ರಿಪೊಲಿ 3

	ಜೇಡಿಮಣ್ಣು ಅಥವಾ ಸುಣ್ಣದ ಕಲ್ಲನ್ನು ಹೋಲುವ, ಸುಲಭವಾಗಿ ಪುಡಿಯಾಗುವ, ಸಣ್ಣ ರಂಧ್ರಗಳಿಂದ ಕೂಡಿದ ಸಿಲಿಕಾ ಶಿಲೆ. ಇದು ಹೊರನೋಟಕ್ಕೆ ಉತ್ತರ ಅಮೆರಿಕದ ಟ್ರಿಪೊಲಿಟಾನಿಯದಲ್ಲಿ ಸಿಗುವ ಟ್ರಿಪೊಲೈಟಿನಂತೆ ಕಾಣುವುದರಿಂದ ಇದಕ್ಕೆ ಟ್ರಿಪೊಲಿ ಎಂಬ ಹೆಸರು ಬಂದಿದೆ. ಲಿಬ್ಯದ ಟ್ರಿಪೊಲಿಯಲ್ಲಿ ಇದನ್ನು ಮೊದಲು ವ್ಯಾಪಾರಕ್ಕಾಗಿ ಬಳಸಿದುದರಿಂದ ಟ್ರಿಪೊಲಿ ಎಂಬ ಹೆಸರು ಬಂದಿತೆಂದು ಮತ್ತೆ ಕೆಲವರ ಅಭಿಪ್ರಾಯ. ಇದು ಅಮೆರಿಕದ ಮಿ¸óÀೂರಿ ಮತ್ತು ಇಲಿನಾಯ್ ರಾಜ್ಯಗಳಲ್ಲಿ ಹೇರಳವಾಗಿಯೂ ಆರ್ಕಾನ್ಸಾ, ಜಾರ್ಜಿಯ ಮತ್ತು ಟೆನಸೀ ಕಣಿವೆಯಲ್ಲಿ ಕೆಲಮಟ್ಟಿಗೂ ದೊರೆಯುತ್ತದೆ. ಟ್ರಿಪೊಲಿಯನ್ನು ಉತ್ತರ ಅಮೆರಿಕದಿಂದ ಇಂಗ್ಲೆಂಡಿಗೆ ವಿಶೇಷವಾಗಿ ರಫ್ತು ಮಾಡುತ್ತಾರೆ. ಯೂರೋಪ್, ಏಷ್ಯ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೂ ರಫ್ತಾಗುತ್ತದೆ. ಇದರಲ್ಲಿ 95% ಸಿಲಿಕಾ ಇದ್ದು ಇದರ ಪುಡಿಯೂ ಬಹಳ ಗಟ್ಟಿಯಾಗಿರುತ್ತದೆ. ಇದರ ಪುಡಿಯನ್ನು ಲೋಹಗಳ, ಅಮೃತಶಿಲೆಯ ಮತ್ತು ಗಾಜಿನ ವಸ್ತುಗಳಿಗೆ ಹೊಳಪು ನೀಡಲು ಉಪಯೋಗಿಸುತ್ತಾರೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ